
Title | : | ooru bhanga |
Author | : | |
Rating | : | |
ISBN | : | - |
Language | : | Kannada |
Format Type | : | Kindle , Hardcover , Paperback , Audiobook & More |
Number of Pages | : | - |
Publication | : | First published January 1, 2015 |
ooru bhanga Reviews
-
ಊರು ಭಂಗ - ವಿವೇಕ ಶಾನಭಾಗ.
ಮರು ಓದು.
ಪ್ರಕಟವಾದಾಗ ಗಪ ಗಪ ಓದಿದ್ದು. ಇಷ್ಟು ವರ್ಷಗಳಾದ ಬಳಿಕ, ಅದೂ ಮಯೂರದಲ್ಲಿ ಅವರ ಸಂದರ್ಶನ ಪ್ರಕಟವಾದ ಬಳಿಕ ಮತ್ತೆ ಅವರೆಲ್ಲ ಕೃತಿಗಳ ಓದಬೇಕು ಅಂತ ತಡೆಯಲಾರದ ಒತ್ತಡ ಉಂಟಾಗಿ ಎತ್ತಿಕೊಂಡದ್ದು. ಒಂದು ಶಬ್ದವೂ ಹೆಚ್ಚು ಕಡಿಮೆಯಾಗದೆ ಬರೆವ ವಿವೇಕ ಶಾನಭಾಗ ಯಾವತ್ತಿಗೂ ನನಗೆ ಬಹಳ ಇಷ್ಟದ ಬರಹಗಾರ.
ಊರುಭಂಗ ಕನ್ನಡದ ಮಟ್ಟಿಗೆ ಹೊಸ ಅರ್ಥ ವಿನ್ಯಾಸಗಳ ಕಾದಂಬರಿ. ಇಲ್ಲಿ ಕೇಂದ್ರ ಯಾವುದು ಅನ್ನುವುದೇ ಪ್ರಶ್ನೆ. ನಲವತ್ತು ದಾಟಿದ ಮನಮೋಹನ ಕಾರ್ಪೋರೇಟ್ ಚಾಣಾಕ್ಷ.ಗಂಭೀರ ಬರಹಗಾರ ಕೂಡ. ಅವನ ಆಫೀಸಲ್ಲಿ ವಿಆರ್ಎಸ್ ತಗೊಂಡು ಇನ್ನೇನು ರಿಟಾಯರ್ಡ್ ಆಗಲು ಹೊರಟ ಭಾಸ್ಕರರಾವ್ 'ಎಲ್ಲವನ್ನೂ ಹೇಳಿಬಿಡುತ್ತೇನೆ' ಅನ್ನುವ ಮಾತಾಡಿದರು ಅಂತ ಕತೆ ಶುರುವಾಗುತ್ತದೆ. ಅದು ಎಬ್ಬಿಸಿದ ತಲ್ಲಣಗಳಿಗೆ ನಿರೂಪಕ ಮೋಹನ್ ಸಾಕ್ಷಿಯಾಗುತ್ತಾನೆ. ಅವನಿಗೆ ಹೆಂಡತಿ,ಮಗ ಇದ್ದಾನೆ. ಪಾರ್ಟಿಯೊಂದರಲ್ಲಿ ಅವನ ಸಹೋದ್ಯೋಗಿ ಪರಿಚಯಿಸುವ ಶಮಿಯ ಜೊತೆ ಅವನಿಗೆ ಸಾಹಚರ್ಯ ಬೆಳೆಯುತ್ತದೆ. ಮನೆಗೆ ಡ್ರಾಪ್ ಕೊಡುವುದರಿಂದ ಶುರುವಾಗಿ ಬೆಳಗಿನ ವಾಕಿಂಗ್ ನಿಂದ ಗಟ್ಟಿಯಾಗುವ ಸ್ನೇಹ, ಅವಳ ಗೆಲ್ಲಲು ಒಂದು ಕತೆಯ ನಿರೂಪಿಸುವ ಮನಮೋಹನ.
ಅದು ಕೀಮಾನಿ ವಕೀಲರ ಕತೆ,ಅವರ ಊರಿನ ಕತೆ. ಅಲ್ಲಿ ಕಾನೂನು,ನ್ಯಾಯ ತಪ್ಪಿ ನಡೆಯದ ವಕೀಲರು, ಅವರಿಂದ ಕಿರಿಕಿರಿಗೆ ಒಳಗಾಗುವ ಜನ,ಅಂಗಡಿಯವರು, ತನ್ನ ಹೆಂಡತಿಯ ಹಾಲು ತಂದು ,ಹೆಪ್ಪು ಹಾಕಿ, ಮೊಸರು ಮಾಡಿ,ಕಡೆದು ಬೆಣ್ಣೆ ತೆಗೆವ ,ಮನೆ ಕ್ಲೀನು ಮಾಡುವ ಗೀಳಿಗೆ ಸಿಕ್ಕಿ ಛಿದ್ರವಾಗಿರುವ ಸದಾನಂದ ಮಾಸ್ತರರು, ತನ್ನಪ್ಪ ಇಟ್ಟ 'ರಾಮರಹೀಮ' ಎಂಬ ಹೆಸರು ತಂದೊಡ್ಡಿದ ಬಾಧೆಗಳ ತಾಳಲಾರದೆ ಅದನ್ನ ಬದಲಾಯಿಸಿ ಅಶೋಕನೆನಿಸಿಕೊಳ್ಳುವ ಮಗ,(ಇಲ್ಲಿ 'ಇನ್ನೂ ಒಂದು' ನೆನಪಾಗುತ್ತದೆ.ಬಹುಶಃ ಕಾಶೀಶ ಇವನೇ ಇರಬಹುದಾ?), ಇದರ ನಡುವೆ ಧುತ್ ಅಂತ ಪ್ರತ್ಯಕ್ಷವಾಗುವ ಎಮರ್ಜೆನ್ಸಿ, ವಕೀಲರ ಗೆಳೆಯ ಸುಂಕಾಪುರರ ಎಲ್ಲವನ್ನೂ ಬರೆವ ಆತ್ಮಕತೆ ಹೊರತರುವ ಹೇಳಿಕೆ, ಅದಕ್ಕೆ ಸರಿಯಾಗಿ ಅವರ ನಾಪತ್ತೆ .ಎಲ್ಲೂ ಸಲ್ಲದೆ ಅಪ್ರಸ್ತುತವಾಗಿ ಬಿಡುವ ಭಯದ ವಕೀಲರು,
ಹೀಗೆ ದಟ್ಟ ವಿವರಗಳಿಂದ ಶಮಿಯ ಪಡೆಯಲೋ ಎಂಬಂತೆ ಮನಮೋಹನ ಹೇಳಿದ ಕತೆಗೆ ಅವಳು ಅವನ ವಶವಾಗುತ್ತಾಳೆ. ಒಮ್ಮೆ ವಶವಾದ ಬಳಿಕ ಅವನ ಆಸಕ್ತಿಯೂ ಕುಗ್ಗುತ್ತದೆ. ತನಗೆ ನಾರ್ಮಲ್ ಸಂಬಂಧಗಳಲ್ಲಿ ಆಸಕ್ತಿಯಿಲ್ಲ ಅಂದ ಅವಳೇ ಪರಿಚಿತರೆದುರು ಮನಮೋಹನ ಮಾತಾಡಿದಾಗ ,ತನ್ನ ಕುಟುಂಬದೊಡನೆ ಟೂರ್ ಹೋದಾಗ ತನ್ನ ಅಸಹನೆಯ ಹೊರಹಾಕಿ ಸಂಬಂಧ ಕಡಿದುಕೊಳ್ಳುತ್ತಾಳೆ. ನಿರೂಪಕ ಮನಮೋಹನನ ಹೆಂಡತಿಗೂ ಅವಳದೇ ಸಮಸ್ಯೆಯಿದೆ.ಮಗ ತೆಗೆದ ಅರವತ್ತೆಂಟು ಪರ್ಸೆಂಟ್ ಎಲ್ಲಿಗೆ ಸಾಕು? ಅನ್ನುವುದು ಅವಳ ಚಿಂತೆ.ಆದರೆ ಮನಮೋಹನ ಅದನ್ನ ಲಘುವಾಗಿ ತೆಗೆದುಕೊಳ್ಳುತ್ತಾನೆ.
ಇತ್ತ 'ಎಲ್ಲವನ್ನೂ ಹೇಳಿಬಿಡುವ ಭಾಸ್ಕರ ರಾಯರು' ತಮ್ಮ ಬೀಳ್ಕೊಡುಗೆಯ ಸಮಾರಂಭದಲ್ಲಿ ತಾವೆಣಿಸಿದ ಆದರೆ ಓದುಗರಾದ ನಮಗೆ ತಿಳಿಯದ ಏನನ್ನೂ ಹೇಳದೇ ಮುಗಿಸುತ್ತಾರೆ.ಅಲ್ಲಿಗದು ಠುಸ್ ಪಟಾಕಿ ಆಗುತ್ತದೆ.(ಇಲ್ಲಿ ಕಾದಂಬರಿಯಲ್ಲಿ ಬರುವ ಸುಂಕಾಪುರರ ಆತ್ಮಕತೆಯೂ ಎಲ್ಲವನ್ನೂ ಹೇಳಿಬಿಡುವ ಮಾತಾಡಿದರೂ ಅದೂ ವಿಫಲವಾಗುವುದು ಗಮನಿಸಬೇಕು)
ಇದೆಲ್ಲವನ್ನೂ ಮನಮೋಹನ ತನ್ನ ಗೆಳೆಯನಾದ ಚಂದೂವಲ್ಲಿ ಹೇಳುತ್ತಿರುವುದು ನಮಗೆ ಗೊತ್ತಾಗುತ್ತದೆ.
ಕಾದಂಬರಿಯ ಕೊನೆಯಲ್ಲಿ ಬರುವ ನಿರೂಪಕ ಮನಮೋಹನ ,ಶಮಿಯ ಮನೆಗೆ ಬೆಳಕು ಹರಿವ ಮುಂಚೆ ಹೋಗಿ ಅವಳ ತಾಯಿಯಿಂದ 'ಗೆಟ್ ಔಟ್' ಅನಿಸಿಕೊಂಡು ಅವಮಾನಿತನಾಗಿ ಬರುವಲ್ಲಿಗೆ ಕಾದಂಬರಿ ಮುಗಿಯುತ್ತದೆ. ಆದರೆ ಅದು ನಿಜವೋ ಕನಸೋ ಅನ್ನುವುದೂ ಸ್ಪಷ್ಟವಿಲ್ಲ.
ಹಾಗಾಗಿ ಇಲ್ಲಿ ನಿರೂಪಕ ಮನಮೋಹನ ಶಮಿಗೆ ಹೇಳಿದ ಕೀಮಾನಿ ವಕೀಲರ ಅಪೂರ್ಣ ಕತೆ ಕಲ್ಪನೆ , ತನ್ನ ಗೆಳೆಯ ಚಂದುವಿಗೆ ಹೇಳಿದ ಈ ಒಟ್ಟೂ ಕತೆ ನಿಜವೇ ಎಂಬ ಅನುಮಾನ ಬರುತ್ತದೆ.
ಹೀಗೆಲ್ಲ ಅಪೂರ್ಣ ಆಸೆಗಳ ,ತೀರದ ಬಯಕೆಗಳ ಕಥಾನಕ ಓದಿದಾಗ,
ಆರಂಭದಲ್ಲಿ ನಿರೂಪಕ ಹೇಳಿದಂತಹ 'ಗಾವಂಟಿ ಅಂತ ಕರೆದ ಮುಂಬಯಿಯ ಹುಡುಗಿ ಕೊಟ್ಟ ಕನಸಂತಹ ಮುತ್ತು'
ಚಂದೂ ಹೇಳ���ದ ತನ್ನ ಅನುಭವದ ಎಂದೂ ಪೂರ್ತಿಯಾಗಿ ಸಿಗದ ಮಾಲೀಕನ ಹೆಂಡತಿಯ ಅನುಭವ ಒಂದು ತೀರವಾದರೆ,
ನಿರೂಪಕ ಲಘುವಾಗಿ ಹಳೆಯ ಗೆಳತಿಯ ಬಗ್ಗೆ ಕೇಳಿದಾಗ ಚಂದೂ ಹೇಳುವ,
'ಇದಾಳೆ ಇದಾಳೆ,ಆಗಾಗ ವರ್ಷಕ್ಕೊಂದೆರಡು ಸಲ ಸಿಗ್ತಾ ಇರ್ತೀವಿ. ಈ ಬದುಕು ನಶ್ವರ ಅನಿಸಿದಾಗ, ಈವತ್ತು ಇರೋದು ಇನ್ನೊಂದು ಗಳಿಗೆಯಲ್ಲಿ ಇಲ್ಲವಾಗಬಹುದು ಅನ್ನೋದು ಹೊಳೆದಾಗ,ಎಲ್ಲವನ್ನೂ ಈ ಕ್ಷಣವೇ ಬಾಚಿಕೋಬೇಕು ಅನಿಸಿದಾಗ ಸೇರ್ತೀವಿ' ಇನ್ನೊಂದೇ ತೀರದ ತರಹ,
ಎಲ್ಲರಿಗೂ ಸಾಧ್ಯವಾಗಬೇಕಾದ ಸಾಧ್ಯವಾಗದ ಆಸೆಗಳ ಪ್ರತಿಮೆಯಾಗಿ ಕಾಣುತ್ತದೆ.
ತನ್ನ ಬಾಲ್ಯದ 'ತೆಂಕಣಕೇರಿ ಪ್ರತಾಪ' ಕ್ಕೆ ಪಕ್ಕಾದ ನಿರೂಪಕ ಅದರಿಂದ ಹೊರಬರಲು ಯತ್ನ ಮಾಡಿ ಸೋಲುತ್ತಾನೆ. ಬಹುಶಃ ಅವನ ಯತ್ನ ಭಂಗವಾದುದು ನಿರೀಕ್ಷಿತವೇ.
(ಕಾದಂಬರಿಯಲ್ಲಿ ಚಿಕ್ಕದೊಂದು ತಪ್ಪಿದೆ. ೨೯ನೇಪುಟದಲ್ಲಿ ನಿರೂಪಕನಿಗೆ ಮಗಳು ಎಂಬ ಉಲ್ಲೇಖವಿದೆ. ಆಮೇಲೆ ಕತೆ ಬೆಳೆದಂತೆ ಮಗ ಅಂತಾಗುತ್ತದೆ.ಮಗಳ ಅನ್ನುವಲ್ಲಿ ಮಗನ ಅಂತಾದರೆ ಎಲ್ಲ ಸರಿ) -
After reading the review about this book, I re-read this book once again to check "Is my taste is good ?" and once i again its proved i made good choice :)
Come back to the book, This is the one of the fine art by 'Vivek Shanbagh'. The novel keep continues in read mode, As one charterer (or Author) describes it as "ಘಂಭೀರ ಸೃಜನಾತ್ಮಕ ಸಾಹಿತ್ಯ", This novel is apt for that category.
In this novel there are two completely different situation stories narrated in parallel, There is no specific end to above stories or this stories not requires any end at all. As this charterers are keep on coming in our daily life and some times we are also part of those stories also, Here author not given any judgment to any charterers and author left all those decisions to the readers.
Here Kimani character is dedicated (0r rigid) principal follower person, His principal thoughts becomes useless in society, Its the problem of the society or he is not updated to outside world is the question which comes in entire story
In another thread there is a story of the Manmohan,Who adapted the corporate life style and involved in extra martial affair.
This novel is kind of poetry as you read depends on 'you' it gives unique imaginations. The narration is too good we can involve in the each character. Vivek Shanabagh given his best in this novel and very good experimental approach he maid, If you already read Viveks books then you can see his same signature here also. -
ಕಳೆದ ಭಾನುವಾರ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ವಾಡಿಯಾ ಸಭಾಂಗಣದಲ್ಲಿ ನಡೆದ ಸುಂದರ ಸಮಾರಂಭದಲ್ಲಿ ವಿವೇಕ್ ಶಾನಭಾಗರ "ಊರು ಭಂಗ" ಕಾದಂಬರಿ ಬಿಡುಗಡೆಯಾಯಿತು. ಕತೆಗಾರರಾಗಿ ಕನ್ನಡದಲ್ಲಿ ವಿಶಿಷ್ಟ ಸ್ಥಾನ ಹೊಂದಿರುವ ಜಯಂತ್ ಕಾಯ್ಕಿಣಿ ಭಾಗವಹಿಸಿದ್ದ ಈ ಕಾರ್ಯಕ್ರಮ ಬಹು ಸಂಖ್ಯೆಯಲ್ಲಿ ಹಾಜರಿದ್ದ ಸಾಹಿತ್ಯದ ಅಭಿಮಾನಿಗಳಿಗೆ ತುಂಬಾ ಖುಷಿ ಕೊಟ್ಟ ಸಭೆಯಾಗಿತ್ತು. ವಿವೇಕ್ ಶಾನಭಾಗರ ಜತೆ ಜಯಂತ್ ನಡೆಸಿಕೊಟ್ಟ ಪ್ರಶ್ನೋತ್ತರವೂ ಬಹಳ ಚೆನ್ನಾಗಿತ್ತು. ಕಾದಂಬರಿ ಪ್ರಕಾರದ ವಿಶೇಷತೆಯ ಬಗೆಗೆ ಜಯಂತರ ಪ್ರಶ್ನೆ ಹಾಗೂ ಅದಕ್ಕೆ ವಿವೇಕರ ಉತ್ತರ ಇವೆರಡೂ ಕುತೂಹಲಕರವಾಗಿದ್ದವು. ಆ ಪ್ರಶ್ನೋತ್ತರದ ವರದಿ ಪ್ರಜಾವಾಣಿ ಯಲ್ಲಿದೆ. ಇದರ ವಿಡಿಯೋ ಸಹ YouTube ನಲ್ಲಿ ಲಭ್ಯವಿದೆ.
ಕಾದಂಬರಿಯೊಂದರ ಓದಿನ ಅನುಭವ ಅದೆಷ್ಟು ಖಾಸಗಿಯಾದದ್ದು, ವೈಯಕ್ತಿಕವಾದದ್ದು ಮತ್ತು ಆಪ್ತವಾದದ್ದು. ಇತರ ಸಾಹಿತ್ಯ ಪ್ರಕಾರಗಳಿಗೆ ಹೋಲಿಸಿದರೆ ಕಾದಂಬರಿಯಲ್ಲಿ ಪಾತ್ರಗಳು ಸಂಕೀರ್ಣವಾಗಿ, ದಟ್ಟವಾಗಿ ಇರಲು ಸಾಧ್ಯ. 'ಮದಾಮ್ ಬೋವರಿ'ಯ ಎಮ್ಮಾ, 'ಕ್ರೈಂ ಅಂಡ್ ಪನಿಶ್ಮೆಂಟ್' ನ ರಸ್ಕಾಲ್ನಿಕೊವ್ ಹೀಗೆ ಹಲವಾರು ಕಾದಂಬರಿಗಳ ಪಾತ್ರಗಳು ನೂರ ಐವತ್ತು ವರ್ಷಗಳಷ್ಟು ಹಿಂದಿನ ಕೃತಿಗಳವಾದರೂ ಒಮ್ಮೆ ಓದಿದ ಮೇಲೆ ಬಹುಶಃ ಜೀವನವಿಡೀ ನಮ್ಮೊಡನೆ ಉಳಿದು ಕಾಡುವಂತಹವು. ಹಾಗೆಯೇ ನಮ್ಮ ಕನ್ನಡದ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯ ನಾಯಿ ಗುತ್ತಿ, 'ಶಿಕಾರಿ'ಯ ನಾಗಪ್ಪ - ಈ ಬಗೆಯ ಪಾತ್ರಗಳೂ ಸುಲಭಕ್ಕೆ ಮರೆಯುವಂತಹವಲ್ಲ. ವಿವೇಕ್ ಅವರು ಜಯಂತರೊಂದಿಗೆ ಮಾತನಾಡುತ್ತಾ ಹೇಳಿದಂತೆ "ಮಲೆಗಳಲ್ಲಿ ಮದುಮಗಳು" ಕಾದಂಬರಿಯಲ್ಲಿ ಕಾಡು ಸಹ ಒಂದು ಪಾತ್ರವಾಗಿಬಿಡುವುದು ಸಹ ಕಾದಂಬರಿ ಪ್ರಕಾರದ ವಿಶಿಷ್ಟತೆಗೊಂದು ನಿದರ್ಶನ.
ತಮ್ಮ ಕಾಲ ದೇಶಗಳನ್ನು ಮೀರಿ ನಮ್ಮನ್ನು ತಲುಪುವ, ಪ್ರಭಾವಿಸುವ, "ಕ್ಲಾಸಿಕ್ಸ್" ಎಂದು ಪರಿಗಣಿಸುವ ಕಾದಂಬರಿಗಳು ಮುಖ್ಯವಾಗಿರುವಂತೆಯೇ ಇಂದಿನ ಕಾಲಘಟ್ಟವನ್ನು ಪ್ರತಿನಿಧಿಸುವ ಕಾದಂಬರಿಗಳೂ ಮುಖ್ಯವೇ. ನಮ್ಮದೇ ಸುತ್ತಲಿ�� ಸಾಮಾಜಿಕ ವಿದ್ಯಮಾನಗಳು ನಮ್ಮರಿವಿನ ಪರಿಧಿಗೆ ಬರುವುದೂ ಇಂಥ ಕಲಾ ಪ್ರಕಾರಗಳ ಮೂಲಕವೇ. ಕಾದಂಬರಿಯೊಂದರಿಂದ ಓದುಗರಾಗಿ ನಾವು ಮುಖ್ಯವಾಗಿ ನಿರೀಕ್ಷಿಸುವುದು ಅದು ದೈನಂದಿನ ಜೀವನದ ತೀವ್ರ ಅನುಭವಗಳ ಚಿತ್ರಗಳನ್ನು ಕಟ್ಟಿ ಕೊಡುತ್ತಲೇ ತಾನು ಪ್ರತಿನಿಧಿಸುವ ಕಾಲಘಟ್ಟದ ತಲ್ಲಣಗಳನ್ನು ಪ್ರತಿಬಿಂಬಿಸಬೇಕೆಂಬುದನ್ನು.
ಸುಮಾರು ನಲವತ್ತು ವರ್ಷಗಳ ಹಿಂದೆಯೇ ಚಿತ್ತಾಲರು "... ಮಾನವನ ಮೂಲಭೂತವಾದ ಭಾವನೆಗಳು ಕೆಡದಂತೆ, ಸಾಯದಂತೆ ಅವು��ಳನ್ನು ಕಾಪಾಡಿಕೊಳ್ಳುವುದರಲ್ಲಿ ಕಲೆಗಳು, ಬಹು ಮುಖ್ಯವಾಗಿ ಸಾಹಿತ್ಯ ವಹಿಸಬಹುದಾದ ಪಾತ್ರವನ್ನು ಒತ್ತಿ ಹೇಳಿದಷ್ಟೂ ಕಡಿಮೆಯೆನಿಸುತ್ತದೆ" ಎಂದು ಬರೆದಿದ್ದರು.
ಒಂದು ಕಾದಂಬರಿಯ ಓದಿಗೆ ತೊಡಗುವುದೆಂದರೆ ಒಂದು ಅಪರಿಚಿತ ಲೋಕವನ್ನು ಪ್ರವೇಶಿಸಿದಂತೆ. ಪರಿಚಯವಾಗುತ್ತಾ ಕ್ರಮೇಣ ಪಾತ್ರಗಳೆಲ್ಲ ನಮ್ಮದೇ ಲೋಕದ ಭಾಗವಾಗುವುದು, ತೀರಾ ಪರಿಚಿತರೆನಿಸುವ ಭಾವ ಮೂಡಿಸುವುದು ಓದಿನ ಅಚ್ಚರಿ ಮತ್ತು ಮಾಂತ್ರಿಕತೆಯ ಪರಿ.
ಸುಮಾರು ಇನ್ನೂರೈವತ್ತು ಪುಟಗಳ "ಊರು ಭಂಗ" ಕಾದಂಬರಿ ಆರಂಭದ ಪುಟಗಳಿಂದಲೇ ಆವರಿಸಿಕೊಳ್ಳುವ ಧಾಟಿಯದು. ಕಳೆದ ನಾಲ್ಕೈದು ದಿನಗಳು ಬಸ್ಸಿನಲ್ಲಿ ಕುಳಿತು ಆಫೀಸಿಗೆ ಪ್ರಯಾಣಿಸುವ ಅವಧಿಯಲ್ಲಿ ಕಾದಂಬರಿ ಓದಿ ಮುಗಿಸಿದ್ದೇ ಅರಿವಿಗೆ ಬರಲಿಲ್ಲ.
ಭಾನುವಾರದ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಈ ಕಾದಂಬರಿಯ ಮೊದಲ ಎರಡು ಅಧ್ಯಾಯಗಳು ಕಾರ್ಪೊರೇಟ್ ಜಗತ್ತಿನ ಕಿರು ಪರಿಚಯ ಮಾಡುವುದರೊಂದಿಗೆ, ಬರವಣಿಗೆಯ ನಿಖರ, ಆಕರ್ಷಕ ಶೈಲಿಯ ಪರಿಚಯವನ್ನೂ ಮಾಡುತ್ತವೆ. ಕಾದಂಬರಿಯುದ್ದಕ್ಕೂ ಸಂಭಾಷಣೆಗಳು , ಸನ್ನಿವೇಶಗಳ ವಿವರಣೆಗಳು , ಎಲ್ಲವೂ ತುಂಬಾ ನೈಜವಾಗಿ ಮೂಡಿ ಬಂದಿವೆ. ಅದರಲ್ಲೂ ಕಾರ್ಪೊರೇಟ್ ಜಗತ್ತಿನ ಪರಿಚಯವಿರುವ ನಗರವಾಸಿ ಓದುಗರಿಗೆ ಆ ಜಗತ್ತಿನ ವಿವರಗಳನ್ನು ಓದುವಾಗ ಅವು ತೀರಾ ಪರಿಚಿತ ವಿಷಯಗಳಂತೆ ಅನಿಸಿದರೆ ಆಶ್ಚರ್ಯವಿಲ್ಲ.
ಅಭಿವ್ಯಕ್ತಿಗೆ ಕಾದಂಬರಿ ಪ್ರಕಾರವು ನೀಡುವ ಕೊಂಚ ಧಾರಾಳ ಸೌಲಭ್ಯವನ್ನು ಸೂಕ್ತವಾಗಿ ಬಳಸಿಕೊಂಡಿರುವ ಲೇಖಕರು ವರ್ತಮಾನದ ಒಂದು ಕವಲು ಮತ್ತು ಒಂದು ಹಿಂದಿನ ತಲೆಮಾರಿನ ಇನ್ನೊಂದು ಕವಲು ಹೀಗೆ ಎರಡು ಕವಲುಗಳಲ್ಲಿ "ಊರು ಭಂಗ" ಕೃತಿಯನ್ನು ನಿರೂಪಿಸಿದ್ದಾರೆ. ಒಂದು ಕವಲು ಸಧ್ಯದ ನಗರ ಕೇಂದ್ರಿತ ಮತ್ತು ಜಾಗತೀಕರಣದ ಪ್ರಭಾವಕ್ಕೊಳಪಟ್ಟ ಮಧ್ಯಮ ವರ್ಗದ ಜೀವನ ಚಿತ್ರವಾದರೆ, ಹಿಂದಿನ ತಲೆಮಾರಿಗೆ ಸಂಬಂಧಿಸಿದ ಕವಲು ಎಪ್ಪತ್ತರ ಶತಮಾನದ ಸಣ್ಣದೊಂದು ಪಟ್ಟಣದ ಮಂದಿಯ ಕತೆಯಾಗಿದೆ.
ಐದು ಭಾಗಗಳಿರುವ ಕಾದಂಬರಿಯ ಒಂದು, ಮೂರು ಮತ್ತು ಐದು - ಈ ಮೂರು ಭಾಗಗಳು ಇಂದಿನ ನಗರ ಕೇಂದ್ರಿತ ಕತೆಯಾಗಿದ್ದು ಉಳಿದೆರಡು ಭಾಗಗಳು ಎಪ್ಪತ್ತರ ದಶಕದ ಕತೆಗೆ ಸೀಮಿತವಾಗಿವೆ. ಹಿಂದಿನ ತಲೆಮಾರಿನ ವೃತ್ತಾಂತವು ನಿರೂಪಕ ತನ್ನ ಗೆಳತಿಗೆ ಹೇಳುವ ಕತೆಯ ರೂಪದಲ್ಲಿ ಬರುವುದೂ ಈ ಕಾದಂಬರಿಯ ಒಂದು ವಿಶೇಷ. ಸರಾಗವಾಗಿ ಓದಿಸಿಕೊಳ್ಳುವ ಶೈಲಿಯಾದರೂ ಹಲವು ಪದರಗಳನ್ನು ಕುಶಲತೆಯಿಂದ ಹೆಣೆದು ಸಿದ್ಧಪಡಿಸಿರುವ ಕಾದಂಬರಿಯಿದು.
ನನಗೆ ಇಷ್ಟವಾದ ಕೆಲವು ಭಾಗಗಳು-
"ಕಾದಂಬರಿಯ ನಿರೂಪಕ ಮನಮೋಹನ ಮತ್ತು ಶಮಿ ಇನ್ನೂ ಹೊಸದಾಗಿ ಪರಸ್ಪರರಿಗೆ ಪರಿಚಯವಾಗುತ್ತಿದ್ದಾಗ ಸಾಹಿತ್ಯದ ಕುರಿತು ಅವರ ಮಾತುಕತೆ-
ಶಮಿ- "ನನಗೂ ಸಾಹಿತ್ಯದಲ್ಲಿ ಆಸಕ್ತಿ. ಆದರೆ ಅಂತ ವಿಶೇಷ ಪರಿಶ್ರಮವಿಲ್ಲ... ಅದೊಂದು ಏರಲಾಗದ ಪರ್ವತದ ಹಾಗೆ ಅನಿಸುತ್ತದೆ..."
ಮನಮೋಹನ- "ಸಾಹಿತ್ಯವೆಂದರೆ ಪರ್ವತಾರೋಹಣದ ಹಾಗೆ ಮಾಡಿ ಮುಗಿಸುವ ಕೆಲಸವಲ್ಲ. ಜೀವನವಿಡೀ ಮಾಡುತ್ತಲೇ ಇದ್ದು ಸುಖಿಸಬೇಕಾದ ಸಂಗತಿ." (ಪುಟ ೧೯)
ಸ್ವಲ್ಪ ಪರಿಚಯವಾದ ಮೇಲೆ ಶಮಿ ಅವನ ಹಿಂದಿನ ಜೀವನದ ಕುರಿತು ಕೇಳಲು ಇಷ್ಟಪಡುತ್ತಾಳೆ. ಆಗ ಅವನು ಬಾಲ್ಯದಲ್ಲಿ ತನ್ನೂರಿನಲ್ಲಿ ನೋಡಿದ್ದ ಕಿಮಾನಿ ವಕೀಲರ ಕತೆ ಹೇಳಲು ನಿರ್ಧರಿಸುತ್ತಾನೆ. ಆ ಕತೆ "ಆದರ್ಶದ ತಟವಟ, ಸಮಾಜದ ಅಸಹನೆ, ಹೊಸ ತಲೆಮಾರಿನ ವಿರೋಧ, ದುರಂತ ನಾಯಕನ ಹಟಮಾರಿತನ ಇತ್ಯಾದಿಗಳು ತುಂಬಿದ ರೋಚಕ ಕತೆಯಾಗಬಹುದು" (ಪುಟ ೫೫) ಎಂದು ಅವನು ಭಾವಿಸುವುದು ಸುಳ್ಳಾಗುವುದಿಲ್ಲ. ಇಡೀ ಒಂದು ಅಧ್ಯಾಯದಲ್ಲಿ ಕಿಮಾನಿ ವಕೀಲರ ಕತೆ ನಿಜಕ್ಕೂ ರೋಚಕವಾಗಿ ಬಿಚ್ಚಿಕೊಳ್ಳುತ್ತದೆ. ಅವರಂತೆ "ಆದರ್ಶ ಮತ್ತು ನ್ಯಾಯಕ್ಕಾಗಿ ಹೋರಾಟ" ಕ್ಕಾಗೆ ಜೀವನ ಮುಡಿಪಿಡುವ ಒಬ್ಬಿಬ್ಬರನ್ನಾದರೂ ನಮ್ಮ ಜೀವನದಲ್ಲೂ ನೋಡಿರುತ್ತೇವೆ. ಅರವಿಂದ ಅಡಿಗರ "ಲಾಸ್ಟ್ ಮ್ಯಾನ್ ಇನ್ ಟವರ್" ಕಾದಂಬರಿಯ ಮಾಸ್ಟರಜಿ ಪಾತ್ರವೂ ಅಂತಹದ್ದೇ.
ಹಾಗೆಯೇ, ನಿತ್ಯವೂ ಅವಳಿಗೆ ��ಂತುಗಳಲ್ಲಿ ಕಿಮಾನಿ ವಕೀಲರ ಕತೆ ಹೇಳುತ್ತಾ ಅವಳನ್ನು ಒಲಿಸಿಕೊಳ್ಳುವ ಮನಮೋಹನನ ತಂತ್ರವೂ ಇಷ್ಟವಾಯಿತು. "ಅರೇಬಿಯನ್ ನೈಟ್ಸ್" ನಲ್ಲಿ ಶಹಾನಿಗೆ ನಿತ್ಯವೂ ಒಂದು ಕತೆ ಹೇಳುತ್ತಾ ಜೀವ ಉಳಿಸಿಕೊಳ್ಳುವ ಶಹಜಾದೆಯ ಪ್ರಸ್ತಾಪ ಕಾದಂಬರಿಯಲ್ಲಿ ಬರುತ್ತದೆ. ಬಹಳ ಹಿಂದೆ ತಮ್ಮ ಒಂದು ಲೇಖನದಲ್ಲಿ ಲಂಕೇಶರು ಸಹ "ಅರೇಬಿಯನ್ ನೈಟ್ಸ್" ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದ್ದರು. ಅದರಲ್ಲಿ ಹೀಗೆ ಬರೆದಿದ್ದರು-"ಬರೆಯುವುದು , ಶೂನ್ಯದಿಂದ ಸದ್ದುಗಳನ್ನು ಹೊರಡಿಸುವುದು, ನಿಶ್ಯಬ್ದದಿಂದ ಸದ್ದುಗಳನ್ನು ಏಳಿಸುವುದು ಲೇಖಕನಿಗೆ ಅಂಟಿದ ಶಾಪ... ಅನುಭವಗಳನ್ನು ಹೇಳುವುದು, ಹೇಳುವ ಮೂಲಕ ಅದನ್ನು ಕಾಣುವುದು, ಬಿಡುಗಡೆ ಪಡೆಯುವುದು ಇದನ್ನು ತಾನೇ ಶಹಜಾದೆ ಮಾಡಿದ್ದು?
ಕಿಮಾನಿ ವಕೀಲರ ಕತೆ ಆರಂಭಿಸುವ ಮುನ್ನ ಪೀಠಿಕೆಯಾಗಿ ಮನಮೋಹನ ಹೀಗೆ ಹೇಳುತ್ತಾನೆ-
"ಇಲ್ಲಿ ಒಂದಿಷ್ಟು ವಿವರಗಳು, ಒಂದಿಷ್ಟು ಘಟನೆಗಳು ಇವೆ. ಸುಮ್ಮನೇ ಇವೆ . ಅತಿ ಬುದ್ಧಿವಂತಿಕೆಯ ಹಮ್ಮಿನಿಂದ ಅವುಗಳ ಪ್ರಸ್ತುತತೆಯೇನು, ಅವುಗಳ ಅರ್ಥವೇನು ಎಂದು ತಿಣುಕತೊಡಗಿದೊಡನೆ ನಮಗೆ ತಿಳಿಯದ್ದನ್ನು ಮನಸು ತೆಗೆದು ಹಾಕುತ್ತದೆ. ಹಾಗಾಗಿ ಅರ್ಥದ ಗೊಡವೆಯೂ ಬೇಡ, ಎಲ್ಲವನ್ನೂ ಒಂದು ಸೂತ್ರಕ್ಕೆ ಕಟ್ಟುವ ಹಟವೂ ಬೇಡ... ಸಂಬಂಧ ಕಲ್ಪಿಸಿ ನಮಗೆ ತಿಳಿದ ಅರ್ಥ ಹೊರಡಿಸುವುದರಲ್ಲೊಂದು ಬಗೆಯ ಹಿಂಸೆಯಿದೆ, ಅನ್ಯಾಯವಿದೆ..."(ಪುಟ ೫೬).
ಇನ್ನು ಕಾದಂಬರಿಯ ಆರಂಭದ ಪುಟಗಳಿಂದಲೂ ವಿದ್ಯುತ್ತಿನಂತೆ ಪ್ರವಹಿಸುತ್ತಾ ಬರುವ ಮನಮೋಹನ-ಶಮಿಯರ ನಡುವಿನ ಒಡನಾಟ, ಸಂಬಂಧಗಳ ಚಿತ್ರಣದ ಬಗೆಗೆ ಒಂದೆರಡು ಮಾತು. ಸಮಾರಂಭವೊಂದರಲ್ಲಿ ಅಚಾನಕ್ಕಾಗಿ ಆಗುವ ಇವರಿಬ್ಬರ ಪರಿಚಯವ ಕ್ರಮೇಣ ಸ್ನೇಹ, ಸರಸ, ಶೃಂಗಾರಗಳ ಹಾದಿಯಲ್ಲಿ ಸಾಗಿ ಕಡೆಗೆ ಇನ್ನೊಂದು ತಿರುವು ಪಡೆಯುವುದು ಕುತೂಹಲಕರವಾಗಿದೆ. ಇದೆಲ್ಲದರ ಅರ್ಥೈಸುವಿಕೆ 'ಅವರವರ ಭಾವಕ್ಕೆ' ಬಿಟ್ಟಿದ್ದು ಅಂದುಕೊಂಡರೂ ಅಸಾಧ್ಯದ್ದೆಂದು ತೋರುವ ಸಂಬಂಧವೊಂದನ್ನು ಸೂಕ್ಷ್ಮತೆಯಿಂದ, ಕುಶಲತೆಯಿಂದ, ಒಂದು ತೀವ್ರತೆಯಿಂದ ಚಿತ್ರಿಸಿರುವ ಬಗೆ ಗಮನ ಸೆಳೆಯುತ್ತದೆ. ಮನಮೋಹನನ ಮೋಹದ ತೀವ್ರತೆಯ ಅಭಿವ್ಯಕ್ತಿಗೆ ಕಾದಂಬರಿಯಲ್ಲೂ ಕವನಗಳನ್ನು ಬಳಸಿರುವುದೂ ಪರಿಣಾಮಕಾರಿ ತಂತ್ರ. ಅದರಲ್ಲೂ "ದೇವರೇ ಅವಳ ಜೊತೆ ಕತ್ತಲೆಯನ್ನೂ ಕೊಡು" ಎಂದು ಆರಂಭವಾಗುವ "ಹಗಲಲ್ಲಿ ಬರಿದಾಗಿ" ಎಂಬ ಹೆಸರಿನ ಕವಿತೆ ಇಷ್ಟವಾಯಿತು. (ಪುಟ ೧೬೮) -
A disappointing book. Nothing is concrete in this book. The story begins abstractly, takes the readers on a ride to few unconnected stories which is totally irrelevant and ends abruptly. None of the stories in this novel has a concrete end. Manmohan, the protagonist of the novel and his tryst with Shami is as ambiguous as it gets. Extra marital affair and you expect something extraordinary down the line, there is a tad disappointment in that too. Manmohan being a storyteller doesn't exactly try to convey any message at all. The village backdrop stories as he narrates about Lawyer Kimani or Dr. Sunkapur doesn't even conclude in any logical way. These short stories were ended abruptly too. Overall, a bad way of narrating a story within the story and bit disappointed with the author Vivek Shanbhag for writing such a stupid book. He must really ponder about what he had tried to convey in this book.
-
Good novel