![ಹುಲಿ ಸವಾರಿ [Huli Savari]](https://images-na.ssl-images-amazon.com/images/S/compressed.photo.goodreads.com/books/1478376851i/32878288.jpg)
Title | : | ಹುಲಿ ಸವಾರಿ [Huli Savari] |
Author | : | |
Rating | : | |
ISBN | : | - |
Language | : | Kannada |
Format Type | : | Paperback |
Number of Pages | : | 104 |
Publication | : | First published January 1, 1995 |
- ನರಹಳ್ಳಿ ಬಲಸುಬ್ರಹಣ್ಯ
(‘ಬದುಕಿನ ಅರ್ಥವಂತಿಕೆ ಅನ್ವೇಷಿಸುವ ಹುಲಿ ಸವಾರಿ’ ಎಂಬ ಲೇಖನದಲ್ಲಿ)
ವಿವೇಕ ಶಾನಭಾಗರ ‘ಹುಲಿ ಸವಾರಿ’ ಇಂದು ನಾವು ಅನುಭವಿಸುತ್ತಿರುವ ಅವಸ್ಥೆಗೆ ಕನ್ನಡಿ ಹಿಡಿದು, ಅದರ ನಯವಂಚನೆ, ತಂತ್ರಗಾರಿಕೆ, ಬಿಗಿ ಹಿಡಿತಗಳ ಬಗೆಗೆ ವಿಶಿಷ್ಟ ಒಳನೋಟಗಳನ್ನು ನೀಡುವ ಮೂಲಕ ಮುಖ್ಯವಾಗುತ್ತದೆ.
- ಗಿರಡ್ಡಿ ಗೋವಿಂದರಾಜ
(‘ಕನ್ನಡದ ಹತ್ತು ಅತ್ಯುತ್ತಮ ಸಣ್ಣ ಕತೆಗಳು’ ಎಂಬ ಲೇಖನದಲ್ಲಿ)
ಹುಲಿ ಸವಾರಿ [Huli Savari] Reviews
-
ಹುಲಿಸವಾರಿ - ವಿವೇಕ ಶಾನಭಾಗ
ನನಗೆ ಭಯಂಕರ ಇಷ್ಟದ ಬರಹಗಾರ. ಅವರ 'ಇನ್ನೂ ಒಂದು' ಅಂತೂ (ಅದರಲ್ಲೂ ಅದರ ಮೊದಲ ಅಧ್ಯಾಯ) ನನಗೆ ಎಷ್ಟನೇ ಓದಿಗೂ ಖುಷಿ ಕೊಡುವ ಪುಟ್ಟ ಕಾದಂಬರಿ. ಅಂತರರಾಷ್ಟ್ರೀಯ ಸಾಹಿತ್ಯಿಕ ಜಗತ್ತಿಗೆ ಅವರ 'ಘಾಚರ್ ಘೋಚರ್' ನಿಂದ ಪ್ರಸಿದ್ದಿಯಾದರೂ ,ಇಲ್ಲಿ ಅವರ ಸಂಪಾದಕತ್ವದ 'ದೇಶ ಕಾಲ ' ತ್ರೈ ಮಾಸಿಕ. 'ಒಂದು ಬದಿ ಕಡಲು', ಇನ್ನೊಬ್ಬ ನ ಸಂಸಾರ' ದಿಂದ ಹೆಚ್ಚು ಪರಿಚಿತರಾದವರು.
ಹುಲಿ ಸವಾರಿ ಸಂಕಲನದ ಕತೆಗಳು 1995 ರ ಸುಮಾರಿನವು.ಜಾಗತೀಕರಣದ ಭಾರತದತ್ತ ಮುಖಮಾಡಿದ ಸಮಯ. ಹಾಗಾಗಿ ಇಲ್ಲಿನ ಕತೆಗಳೂ ಆ ನೆಲೆಯಿಂದ ನೋಡಿದಾಗ ಸ್ವಾಭಾವಿಕವಾಗಿ ಇಷ್ಟವಾಗುತ್ತವೆ.'ಕಂತು' ವಿನಮಾಸ್ತರು, 'ಜಾಮೀನು ಸಾಹೇಬ' ದ ದಯಾನಂದ ಒಬ್ಬರೇ ಅನಿಸುತ್ತದೆ. 'ಹುಲಿ ಸವಾರಿ' ಯಂತೂ ಕನ್ನಡ ದ ಅತ್ಯತ್ತಮ ಕತೆಗಳಲ್ಲೊಂದು ಆಟದೊಳಗೆ ತನ್ಮಯರಾದವರಿಗೆ ತಾವೂ ಆಟಗಾರರಲ್ಲ ದಾಳಗಳು ಅಂತ ಗೊತ್ತಿರದ ಗೊತ್ತಾದರೂ ಏನೂ ಮಾಡಲಾಗದ ಒಟ್ಟಾರೆ ಹೇಳುವುದಾದರೆ ಕನ್ನಡದ ಮೊದಲ ಸಾಲಿನ ಜಾಗತಿಕ ಕತೆ( ಕನ್ನಡ ಬಿಟ್ಟು ಯಾವ ಭಾಷೆಗೆ ಅದನ್ನು ಹೆಸರು ಬದಲಿಸಿ ಹಾಕಿದರೂ ಸರಿಯಾಗಿ ಕೂತುಕೊಳ್ಳುವ) . ಸಶೇಷ ತುಂಬಾ ಲೆಕ್ಕಾಚಾರದ ಕತೆ.ಪ್ರತ್ಯಕ್ಷ ದ ಸಿಕ್ಕುಗಳ ಬಿಡಿಸಲಾರದ ಅಸಹಾಯಕತೆ ನಮ್ಮದೇ ಅನಿಸುತ್ತದೆ. ಸಂದರ್ಭ ಮಾತ್ರ ವಿಶಿಷ್ಟ.
ಕನ್ನಡದ ಮಟ್ಟಿಗೆ ಅನಗತ್ಯ ಪದಗಳಿಲ್ಲದ, ಜಾಗತಿಕ ಕತೆಗಳ ಕೊಟ್ಟವರು ವಿವೇಕ ಶಾನಭಾಗ. ಅವರ ಬರಹ ಬದುಕಿನ ಒಂದು ಮೈಲಿಗಲ್ಲು ಈ ಸಂಕಲನ. ಹಾಗಾಗಿ ಮರುಓದಿಗೂ ಖುಷಿಯೇ! -
ತುಂಬಾ ಸೊಗಸಾದ ಕಥೆಗಳು, ಒಂದಕ್ಕಿಂತ ಒಂದು ಚೆನ್ನಾಗಿವೆ. ಈ ಕಥೆಗಳು ವಾಕ್ಯಗಳಲ್ಲಿ ಹೇಳುವುದಕ್ಕಿಂತ ಹೇಳದೇ ತಿಳಿಸುವುದೇ ಹೆಚ್ಚು ಅನ್ನಿಸುತ್ತದೆ.